ಭಾರತದಲ್ಲಿ ನಡೆದ ಕದನ ಗಳ ಪೂರ್ತಿ ವಿವರ
ನಿಮಗಾಗಿ SDA/FDA ಗೆ ಉಪಯುಕ್ತವಾಗುವ ನೋಟ್ಸ್
ಮೊದಲನೇ ತರೈನ್ ಕದನ
ಒಂದನೆಯ ತರೈನ್ ಕದನ ನಡೆದಿದ್ದು 1190-91ರಲ್ಲಿ. ಘೋರಿ ಮುಹಮ್ಮದನ ಸೇನೆ ಪೃಥ್ವೀರಾಜನ ಅಧೀನದಲ್ಲಿದ್ದ ಪ್ರದೇಶಗಳಲ್ಲಿ ದಾಳಿ ಮಾಡತೊಡಗಿದಾಗ ಪೃಥ್ವೀರಾಜ ಎರಡು ಲಕ್ಷ ಕುದುರೆಗಳೂ ಮೂರು ಸಾವಿರ ಆನೆಗಳೂ ಇದ್ದ ದೊಡ್ಡ ಸೈನ್ಯದೊಂದಿಗೆ, ತನ್ನ ಸಾಮಂತ ರಜಪೂತ ದೊರೆಗಳೊಡಗೂಡಿ, ಘೋರಿ ಮುಹಮ್ಮದ ಬೀಡುಬಿಟ್ಟಿದ್ದ ತಬರಿಂಧಾ (ಈಗಿನ ಸರ್‍ಹಿಂದ್) ಕಡೆಗೆ ಹೊರಟ. ಮುಹಮ್ಮದ ಇವನನ್ನು ತರೈನ್ನಲ್ಲಿ ಎದುರಿಸಿದ. ಅಲ್ಲಿ ನಡೆದ ಕದನದಲ್ಲಿ ಮುಹಮ್ಮದನ ಸೈನ್ಯದ ಎಡ-ಬಲ ಪಕ್ಕಗಳು ಬಲಗುಂದಿದುವು. ಆ ಸೈನಿಕರು ಪಲಾಯನ ಮಾಡಿದರು. ಮುಹಮ್ಮದನ ಸೇನೆ ಕರಗಿತು. ಮುಹಮ್ಮದ ಕುದುರೆಯ ಮೇಲೆ ಕುಳಿತು. ತನ್ನ ಕತ್ತಿಯನ್ನು ಹಿರಿದು, ಅಳಿದುಳಿದ ಸೇನೆಯೊಂದಿಗೆ ರಜಪೂತರತ್ತ ಮುನ್ನುಗ್ಗಿದ. ದೆಹಲಿಯ ಗೋವಿಂದರಾಜ ಇವನನ್ನು ಕಂಡು, ತನ್ನ ಆನೆಯನ್ನು ಮುಹಮ್ಮದನ ಕಡೆಗೆ ನುಗ್ಗಿಸಿದ. ಮುಹಮ್ಮದ ಅವನ ಮೇಲೆ ಭರ್ಜಿಯೊಂದನ್ನು ಎಸೆದ. ಗೋವಿಂದರಾಜನ ಮುಂದಿನ ಎರಡು ಹಲ್ಲುಗಳು ಮುರಿದವು. ಗೋವಿಂದರಾಜ ಪ್ರತಿಯಾಗಿ ಎಸೆದ ಭಲ್ಲೆಯಿಂದ ಸುಲ್ತಾನನ ತೋಳಿನಲ್ಲಿ ತೀವ್ರವಾದ ಗಾಯವಾಯಿತು. ಮುಹಮ್ಮದ್ ಬೀಳದಂತೆ ಖಲ್ಜಿ ಸೈನಿಕನೊಬ್ಬ ತಡೆದು ಅವನನ್ನು ರಣರಂಗದಿಂದ ಆಚೆಗೆ ಕರೆದೊಯ್ದ. ಮುಹಮ್ಮದ ಸೋತು ಹಿಂದಿರುಗಬೇಕಾಯಿತು. ಈ ಕದನದಲ್ಲಿ ರಜಪೂತರ ಕಡೆ ಪ್ರಧಾನ ಪಾತ್ರ ವಹಿಸಿದ್ದವನು ಪೃಥ್ವೀರಾಜನ ದಂಡನಾಯಕನಾಗಿದ್ದ ಸ್ಕಂದ.
ಎರಡನೇ ತರೈನ್ ಕದನ
ಎರಡನೆಯ ತರೈನ್ ಕದನ 1192ರಲ್ಲಿ ನಡೆಯಿತು. ಪೃಥ್ವೀರಾಜನಿಂದ ಪರಾಜಿತನಾದ ಘೋರಿ ಮುಹಮ್ಮದ
ಮೊದಲನೇ ಪಾಣಿಪತ್ ಕದನ
ಒಂದನೆಯ ಪಾಣಿಪತ್ ಯುದ್ಧದೊಂದಿಗೆ ಭಾರತದಲ್ಲಿ ಮುಘಲ್ ಸಾಮ್ರಾಜ್ಯದ ಬೀಜಾಂಕುರವಾಯಿತು. ಪಾಣಿಪತ್ ಈಗಿನ ಹರ್ಯಾನಾದಲ್ಲಿರುವ ಒಂದು ಸ್ಥಳ.ಈ ಯುದ್ಧವಾದದ್ದು ಕ್ರಿ.ಶ. ೧೫೨೬ರಲ್ಲಿ
ಏಪ್ರಿಲ್ ೧೨ರಂದು ನಡೆದ ಈ ಯುದ್ಧದಲ್ಲಿ ಕಾಬೂಲಿನ ರಾಜ, ತೈಮೂರನ ವಂಶಜ , ಜಹೀರ್ ಅಲ್ ದೀನ ಮುಹಮ್ಮದ್ ಬಾಬರನು ದೆಹಲಿಯ ಸುಲ್ತಾನ ಇಬ್ರಾಹಿಮ್ ಲೋಧಿಯ ದೊಡ್ಡ ಸೈನ್ಯವನ್ನು ಸೋಲಿಸಿದನು.
ಎರಡನೇ ಪಾಣಿಪತ್ ಕದನ
ಮುಘಲ್ ರಾಜ ಹುಮಾಯೂನನು ಪುಸ್ತಕ ಭಂಡಾರದ ಮೆಟ್ಟಿಲಮೇಲಿಂದ ಇಳಿದು ಬರುವಾಗ ಜಾರಿ ಬಿದ್ದು , ಮರಣ ಹೊಂದಿದನು. ಅಂದು ತಾರೀಖು ೧೫೫೬ರ ಜನವರಿ ೨೪. ಅವನ ನಂತರ ಅವನ ಮಗ , ಹದಿಮೂರು ವರ್ಷದ ಬಾಲಕ ಅಕ್ಬರ್ ಪಟ್ಟವೇರಿದನು. ಈ ಕಾಲದಲ್ಲಿ ಮುಘಲ್ ಸಾಮ್ರಾಜ್ಯವು ಕಾಬೂಲು, ಕಾಂದಹಾರ್ ಪ್ರದೇಶಗಳು, ಹಾಗೂ ದೆಹಲಿ ಮತ್ತು ಪಂಜಾಬಿನ ಕೆಲ ಭಾಗಗಳಿಗೆ ಸೀಮಿತವಾಗಿತ್ತು. ಹುಮಾಯೂನನ ಮರಣದ ವೇಳೆಗೆ ಅಕ್ಬರ್ ಪಂಜಾಬಿನ ಮೇಲಿ ದಂಡೆತ್ತಿ ಹೋಗಿದ್ದ. ಅವನೊಂದಿಗೆ ಅವನ ರಕ್ಷಕ ಬಂಟ ಬೈರಾಮ ಖಾನನೂ ಇದ್ದನು. ೧೫೫೬ರ ಫೆಬ್ರುವರಿಯಂದು , ಪಂಜಾಬಿನ ಕಲಾನೌರ್ ಎಂಬಲ್ಲಿಯ ತೋಟವೊಂದರಲ್ಲಿ ಅಕ್ಬರನ ಪಟ್ಟಾಭಿಷೇಕವಾಯಿತು. ಚುನಾರ್ ಪ್ರದೇಶದ ಅಫ್ಘನಿ ರಾಜ ಆದಿಲ್ ಷಹಾ ಸೂರಿಯ ಪ್ರಧಾನ ಮಂತ್ರಿಯಾಗಿದ್ದ ಹೇಮುವು ಮುಘಲರನ್ನು ಭಾರತದಿಂದ ಓಡಿಸಬೇಕೆಂದು ಕಾಯುತ್ತಿದ್ದ. ಹುಮಾಯೂನನ ಮರಣದ ವೇಳೆ ಬಂಗಾಳದಲ್ಲಿದ್ದ ಹೇಮು ಅದರ ಲಾಭ ಪಡೆದುಕೊಂಡು ಮುಘಹಲ್ ಸಾಮ್ರಾಜ್ಯವನ್ನು ಹೆಸರಿಲ್ಲದಂತೆ ಮಾಡುವ ತನ್ನ ಆಸೆಯನ್ನು ತನ್ನ ಅಫಘನಿ ಮತ್ತು ರಜಪೂತ ಸೈನ್ಯಾಧಿಕಾರಿಗಳಿಗೆ ಪ್ರಕಟಪಡಿಸಿ, ನೆಪೋಲಿಯನ್ ಹೊರಟಂತೆ ದಂಡಯಾತ್ರೆ ಹೊರಟನು. ದಾರಿಯುದ್ದಕ್ಕೂ ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶ ಇವುಗಳನ್ನು ಗೆದ್ದು ಆಗ್ರಾಕ್ಕೆ ಲಗ್ಗೆ ಹಾಕಿದನು. ಮುಘಲ್ ಸೈನ್ಯದ ಸೇನಾಪತಿ ಯುದ್ಧರಂಗದಿಂದ ಓಡಿಹೋದನು. ಆಗ್ರಾ ನಗರವು ಪ್ರತಿಭಟನೆಯಿಲ್ಲದೆ ಹೇಮುವಿನ ವಶವಾಯಿತು. ಇಟಾವಾ, ಆಗ್ರಾ ಮತ್ತು ಕಲ್ಪಿ ಪ್ರದೇಶಗಳನ್ನೊಳಗೊಂಡ ದೊಡ್ಡ ಪ್ರದೇಶ ಹೇಮುವಿನ ಸುಪರ್ದಿಗೆ ಬಂದಿತು. ಅಲ್ಲಿಂದ ದೆಹಲಿಯತ್ತ ತನ್ನ ಸೈನ್ಯವನ್ನು ಚಲಾಯಿಸಿದ ಹೇಮುವು ತುಘಲಕಾಬಾದಿನ ಹೊರಗೆ ಬೀಡುಬಿಟ್ಟನು. ೧೫೫೬ರ ಅಕ್ಟೋಬರ್ ೬ರಂದು ಹೇಮುವ ಸೈನ್ಯಕ್ಕೆ ಮುಘಲ್ ಸೈನ್ಯ ಎದುರಾಯಿತು. ತೀವ್ರ ಕದನದ ನಂತರ ಅಕ್ಬರನ ಸೈನ್ಯವನ್ನು ಹಿಮ್ಮೆಟ್ಟಿಸಲಾಯಿತು.ತಾರ್ಡಿ ಬೇಗ್ ಎಂಬ ಮುಘಲ್ ಸೇನಾಧಿಕಾರಿ ಪಲಾಯನಗೈದಿದ್ದರಿಂದ ಹೇಮುವು ವಿಶೇಷ ಪ್ರಯತ್ನವಿಲ್ಲದೆ ದೆಹಲಿ ತಲುಪಲು ಅನುವಾಯಿತು. ಈ ಯುದ್ಧದಲ್ಲಿ ಸುಮಾರು ೩೦೦೦ ಸೈನಿಕರು ಮಡಿದರು.
ಯುದ್ಧ
ದೆಹಲಿ ಮತ್ತು ಆಗ್ರಾದಲ್ಲಿನ ಬೆಳವಣಿಗೆಗಳಿಂದ ಕಲಾನೌರಿನ ಮುಘಲರು ಪ್ರಕ್ಷುಬ್ದರಾದರು. ಅನೇಕ ಸೇನಾಧಿಕಾರಿಗಳು ಅಕ್ಬರ್ ಮತ್ತು ಬೈರಾಮ ಖಾನರಿಗೆ ಹೇಮುವಿನ ಸೇನೆಯನ್ನು ಎದುರಿಸುವ ಶಕ್ತಿ ಮುಘಲ್ ಸೇನೆಗೆ ಇಲ್ಲವಾದ್ದರಿಂದ ಕಾಬೂಲಿಗೆ ಮರಳಿಹೋಗುವಂತೆ ಸಲಹೆಯಿತ್ತರೂ, ಬೈರಾಮಖಾನ ಯುದ್ಧವನ್ನೇ ಆಯ್ದುಕೊಂಡ. ಅಕ್ಬರನ ಸೇನೆ ದೆಹಲಿಯತ್ತ ನಡೆಯಿತು. ನವೆಂಬರ್ ೫ರಂದು ಎರಡೂ ಸೇನೆಗಳು ಐತಿಹಾಸಿಕ ಪಾಣಿಪತ್ತಿನಲ್ಲಿ ಎದುರಾದವು. ಇದೇ ಪಾಣಿಪತ್ತಿನಲ್ಲಿ ಮೂವತ್ತು ವರ್ಷಗಳ ಕೆಳಗೆ ಇಬ್ರಾಹಿಮ್ ಲೋಧಿಯನ್ನು ಸೋಲಿಸಿ ಬಾಬರನು ಮುಘಲ್ ವಂಶದ ಅಡಿಪಾಯ ಹಾಕಿದ್ದ. ( ಇದು ಒಂದನೆಯ ಪಾಣಿಪತ್ ಯುದ್ಧ ಎಂದು ಇಂದಿಗೂ ಕರೆಯಲ್ಪಡುತ್ತದೆ). ಹೇಮುವಿನ ಸೈನ್ಯ ಮೊದಮೊದಲು ಜಯಭೇರಿ ಬಾರಿಸಿದರೂ, ಹೇಮುವಿನ ಕಣ್ಣಿಗೆ ಎದುರಾಳಿಗಳ ಬಿಲ್ಲುಗಾರನೊಬ್ಬ ಬಾಣ ನಾಟಿದ್ದರಿಂದ ಯುದ್ಧದ ದಿಕ್ಕೇ ಬದಲಾಯಿತು. ಹೇಮುವಿನ ಗಾಯದಿಂದ ಎದೆಗುಂದಿನ ಅವನ ಸೈನಿಕರು ಸೋಲಪ್ಪಿದರು.ಹೇಮುವನ್ನು ಸೆರೆಹಿಡಿದು ಯುದ್ಧರಂಗದಿಂದ ೫ ಕೋಶ ದೂರದಲ್ಲಿದ್ದ ಅಕ್ಬರ್ ಮತ್ತು ಬೈರಾಮ ಖಾನರಲ್ಲಿಗೆ ತರಲಾಯಿತು. ಈ ಯುದ್ಧದಿಂದ ಮುಘಲ್ ಸಾಮ್ರಾಜ್ಯ ಭಾರತದಲ್ಲಿ ಮತ್ತೆ ಪ್ರತಿಷ್ಟಾಪಿತವಾಯಿತು
ಮೂರನೇ ಪಾಣಿಪತ್ ಕದನ
ಮೂರನೆಯ ಪಾಣಿಪತ್ ಯುದ್ಧ ೧೭೬೧ರ ಜನವರಿ ೧೪ರಂದು ಇಂದಿನ ಹರ್ಯಾಣದಲ್ಲಿರುವ ಪಾಣಿಪತ್ನಲ್ಲಿ ( ) ಮರಾಠ ಸಾಮ್ರಾಜ್ಯ ಮತ್ತು ಅಹ್ಮದ್ ಶಾಹ್ ದುರ್ರಾನಿ (ಅಹ್ಮದ್ ಶಾಹ್ ಅಬ್ದಾಲಿ ಎಂದೂ ಕೂಡ ಕರೆಯಲಾಗುತ್ತದೆ) ನೇತೃತ್ವದ ಪಾಶ್ತುನ್ ಜನರ ಸೇನೆಯ ಮಧ್ಯೆ ನಡೆದ ಯುದ್ಧ. ಇದು ಪಾಣಿಪತ್ ಅಲ್ಲಿ ನಡೆದ ಮೂರನೆಯ ಯುದ್ಧ. ಈ ಯುದ್ಧದಲ್ಲಿ ಫ್ರೆಂಚರಿಂದ ಮದ್ದು ಗುಂಡು ಮತ್ತಿ ತರಬೇತಿ ಗಳಿಸಿದ್ದ ಮರಾಠರಿಗೂ, ಅಹಮದ್ ಶಾ ಅಬ್ದಾಲಿಯ ಸಬಲ ಕುದುರೆ ಕಾಳಗ ನಿಪುಣರ ಮಧ್ಯೆ ಮುಖಾಮುಖಿಯಾಯಿತು.
ಮುಘಲ ಸಾಮ್ರಾಜ್ಯ ಶಿಥಿಲವಾಗುತ್ತಿರುವುದರ ಲಾಭ ಪಡೆದ ಮರಾಠರ ಒಕ್ಕೂಟವು ತನ್ನ ರಾಜ್ಯವನ್ನು ವಿಸ್ತರಿಸತೊಡಗಿತು. ಇದರಿಂದ ಅಸಮಾಧಾನಗೊಂಡವರಲ್ಲಿ ಅಹಮದ್ ಶಾ ಅಬ್ದಾಲಿಯೂ ಒಬ್ಬನಾಗಿದ್ದ. ೧೭೫೯ರಲ್ಲಿ ಅಫ್ಘಾನಿಸ್ತಾನದ ಪಶ್ತೂನ್ ಜನಗಳ ಸೈನ್ಯವನ್ನು ಕಟ್ಟಿ , ಮರಾಠರ ಸಣ್ಣ ಪುಟ್ಟ ಸೈನ್ಯಗಳ ಮೇಲೆ ವಿಜಯ ಸಾಧಿಸಿದ. ಇದರಿಂದ ಕುಪಿತರಾದ ಮರಾಠರು ಸದಾಶಿವರಾವ್ ಭಾವುವಿನ ಮುಖಂಡತ್ವದಲ್ಲಿ ೧೦೦,೦೦೦ ಜನರ ಸೈನ್ಯದೊಂದಿಗೆ ದೆಹಲಿಗೆ ದಾಳಿ ಮಾಡಿ ನಗರವನ್ನು ಹಾಳುಗೆಡವಿದರು. ಇದರ ನಂತರ ಕರ್ನಾಲ್ ಮತ್ತು ಕುಂಜುಪುರಗಳ ಯಮುನಾ ನದಿಯ ದಂಡೆಯ ಮೇಲೆ ಮರಾಠರಿಗೂ ಅಹಮದ್ ಶಾಹನಿಗೂ ಸಣ್ಣಪುಟ್ಟ ತಿಕ್ಕಾಟಗಳಾಗಿ, ಇದೇ ಮುಂದೆ ಮರಾಠರಿಗೆ ಎರಡು ತಿಂಗಳು ದಿಗ್ಬಂಧನದಲ್ಲಿ ಕೊನೆಯಾಯಿತು.
ಯುದ್ಧ ನಡೆದ ನಿರ್ದಿಷ್ಟ ಜಾಗದ ಬಗ್ಯೆ ವಿದ್ವಾಂಸರಲ್ಲಿ ಒಮ್ಮತವಿಲ್ಲದೆಯೇ ಹೋದರೂ, ಬಹುತೇಕ ಅಭಿಪ್ರಾಯಗಳ ಪ್ರಕಾರ ಇಂದಿನ ಕಾಲಾ ಆಂಬ್ ಮತ್ತು ಸನೌಲಿ ರಸ್ತೆ ಹತ್ತಿರದಲ್ಲೆಲ್ಲೋ ನಡೆದಿರಬೇಕು. ಅನೇಕ ದಿನಗಳ ಕಾಲ ನಡೆದ ಈ ಯುದ್ಧದಲ್ಲಿ ೧೨೫,೦೦೦ ಸೈನಿಕರು ಪಾಲ್ಗೊಂಡಿದ್ದರು. ಎರಡೂ ಪಕ್ಷಗಳಲ್ಲಿ ಲಾಭ ನಷ್ಟಗಳಿದ್ದವು. ಮರಾಠರ ಅನೇಕ ತುಕಡಿಗಳನ್ನು ಧ್ವಂಸ ಮಾಡಿದ ಅಬ್ದಾಳಿಯ ಸೈನ್ಯ ವಿಜಯಶಾಲಿಯಾಯಿತು. ಸತ್ತವರ ಸಂಖ್ಯೆಯ ಬಗ್ಯೆ ಭಿನ್ನಾಭಿಪ್ರಾಯಗಳಿದ್ದರೂ, ೬೦,೦೦೦-೭೦,೦೦೦ ಜನ ಸತ್ತಿರಬೇಕು ಎಂದು ಅಂದಾಜಿದೆ. ಗಾಯಗೊಂಡವರ ಮತ್ತು ಸೆರೆಸಿಕ್ಕವರ ಸಂಖ್ಯೆಯಲ್ಲಿ ಬಹಳಷ್ಟು ವ್ಯತ್ಯಾಸಗಳಿವೆ. ಸದಾಶಿವರಾವರಾವ್ ಭಾವು ಈ ಯುದ್ಧದಲ್ಲಿ ಮಡಿದನು. ಇತರ ಅನೇಕ ಮರಾಠಾ ಸೇನಾಧಿಕಾರಿಗಳನ್ನು ಚಿತ್ರಹಿಂಸೆ ಕೊಟ್ಟು ಕೊಲ್ಲಲಾಯಿತು. ಈ ಯುದ್ಧದ ಅತ್ಯಂತ ಮಹತ್ವದ ಪರಿಣಾಮವೆಂದರೆ, ಇದರಿಂದ ಮರಾಠರ ಉತ್ತರ ಭಾರತದತ್ತ ರಾಜ್ಯ ವಿಸ್ತಾರ ನಿಂತು ಹೋಯಿತು.
ಖಾನವಾ ಕದನ
ನಡೆದ ದಿನಾಂಕ : ಕ್ರಿ, ಶ 1527
ಪಲಿತಾಂಶ: ಬಾಬರ್ ರಾಣ ಶುಂಗನನ್ನು ಸೋಲಿಸಿದನು , ಭಾರತದಲ್ಲಿ ಬಾಬರ್ ಮತ್ತಷ್ಟು ತನ್ನ ಹೆಗ್ಗುರುತು ಬಲಪಡಿಸಲು ಅವಕಾಶವಾಯಿತು
ಘಾಘ್ರೀ ಕದನ
ನಡೆದ ದಿನಾಂಕ : ಕ್ರಿ, ಶ 1529
ಫಲಿತಾಂಶ: ಬಾಬರ್ ನು ಮಹಮದ್ ಲೋದಿ ಮತ್ತು ಸುಲ್ತಾನ್ ನುಸೃತ್ ಶಾರನ್ನು ಸೋಲಿಸಿದನು, ಈ ಯುದ್ಧ ಭಾರತದಲ್ಲಿ ಮೊಗಲ್ ಆಡಳಿತ ಸ್ಥಾಪನೆಗೆ ಕಾರಣವಾಯಿತು
ತಾಳಿಕೋಟೆ ಕದನ
ಹಲ್ದಿಘಾಟಿ ಕದನ
ಪ್ಲಾಸಿ ಕದನ
ವಾಂಡಿವಾಸ ಕದನ
ನಡೆದ ದಿನಾಂಕ: ಕ್ರಿ, ಶ 1760
ಫಲಿತಾಂಶ: ಬ್ರಿಟಿಷರು ಭಾರತದಲ್ಲಿ ನಿರ್ಣಾಯಕವಾಗಿ ಫ್ರೆಂಚರನ್ನು ಸೋಲಿಸಿದರು, ಯುರೋಪಿನಲ್ಲಿ ಬ್ರಿಟಿಷ್ ಮತ್ತು ಫ್ರೆಂಚರ ನಡುವೆ 7 ವರ್ಷದ ಯುದ್ಧ (1756-1763) ಯುದ್ಧಕ್ಕೆ ಕಾರಣ ಬ್ರಿಟಿಷ್ ಮತ್ತು ಫ್ರೆಂಚರ ನಡುವೆ 3 ಕರ್ನಾ ಟಿಕ ಯುದ್ಧಗಳು ನಡೆದವು ಮತ್ತು ಈ ಯುದ್ಧವು 3 ನೇ ಕರ್ನಾ ಟಿಕ ಯುದ್ಧವು ಭಾಗವಾಯಿತು
ಬಕ್ಸಾರ ಕದನ
ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಮತ್ತು ಬಂಗಾಳದ ನವಾಬ ಹಾಗೂ ಅವನ ಫ್ರೆಂಚ್ ಬೆಂಬಲಿಗರ ನಡುವೆ ಪ್ಲಾಸಿಯಲ್ಲಿ ನಡೆದ ನಿರ್ಣಾಯಕ ಯುದ್ಧದಲ್ಲಿ ಬ್ರಿಟಿಷರು ಗೆದ್ದು ಮುಂದೆ ೧೯೦ ವರ್ಷಗಳ ಕಾಲ ಭಾರತದಲ್ಲಿ ಬ್ರಿಟಿಷ್ ಆಡಳಿತಕ್ಕೆ ಅಡಿಪಾಯ ಹಾಕಿದರು. ೧೭೫೭ರ ೨೩ನೇ ಜೂನಿನಂದು ಪ಼ಶ್ಚಿಮ ಬಂಗಾಳದ ,ಭಾಗೀರಥಿ ನದಿಯ ದಂಡೆಯ ಮೇಲಿರುವ ,ಪ್ಲಾಸಿಯಲ್ಲಿ ಈ ಯುದ್ಧ ನಡೆಯಿತು.
ಈ ಯುದ್ಧದ ಒಂದು ಕಡೆ ಬಂಗಾಳದ ಕೊನೆಯ ಸ್ವತಂತ್ರ ನವಾಬ ಸಿರಾಜುದ್ದೌಲನೂ, ಇನ್ನೊಂದು ಕಡೆ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯೂ ಇದ್ದವು. ಯೂರೋಪಿನಲ್ಲಿ ನಡೆದ ಏಳು ವರ್ಷದ ಯುದ್ಧ (೧೭೫೬-೬೩) ದ ಕಾಲದಲ್ಲಿಯೇ ಈ ಕದನ ಭಾರತದಲ್ಲಿ ನಡೆಯಿತು. ಯೂರೋಪಿನ ಲ್ಲಿಯ ವೈರದ ಪ್ರಭಾವದಿಂದ , ಫ್ರೆಂಚರು , ಭಾರತದ ಈ ಕದನದಲ್ಲಿ ಬ್ರಿಟಿಷ್ರ ವಿರುದ್ಧ ಹೋರಾಡಲು ಸಣ್ಣ ತುಕಡಿಯನ್ನು ಕಳುಹಿಸಿದರು. ಸಿರಾಜುದ್ದೌಲನ ಸೈನ್ಯ ಬ್ರಿಟಿಷರಿಗಿಂತ ಉತ್ತಮವಾಗಿದ್ದು, ಪ್ಲಾಸಿಯಲ್ಲಿ ಬೀಡುಬಿಟ್ಟಿತ್ತು. ಸೋಲಿನ ಸಂಭವದಿಂದ ಚಿಂತಿತರಾದ ಬ್ರಿಟಿಷರು ಸಿರಾಜುದ್ದೌಲನ ಪದಚ್ಯುತ ಸೇನಾಪತಿ ಮೀರ್ ಜಾಫರ್ ಮತ್ತು ಇಬ್ಬರನ್ನು ತಮ್ಮ ಕಡೆಗೆ ಸೆಳೆದುಕೊಳ್ಳುವುದರಲ್ಲಿ ಯಶಸ್ವಿಯಾದರು. ಆ ಸಂಚಿನ ಪ್ರಕಾರ ಮೀರ್ ಜಾಫರನು ತನ್ನ ಸೈನ್ಯವನ್ನು ಯುದ್ಧದ ಕಣದಲ್ಲಿ ಜಮಾಯಿಸಿದರೂ, ಯುದ್ಧದಲ್ಲಿ ಭಾಗವಹಿಸುವ ಯಾವ ಪ್ರಯತ್ನವನ್ನೂ ಮಾಡಲಿಲ್ಲ. ಇದರಿಂದ ಸಿರಾಜುದ್ದೌಲನ ಸೈನ್ಯ ಸೋಲನ್ನುಂಡಿತು. ತಲೆಮರೆಸಿಕೊಂಡ ಸಿರಾಜುದ್ದೌಲ ನನ್ನು ನಂತರ ಹಿಡಿದು ಕೊಲ್ಲಲಾಯಿತು. ಈ ಸೋಲಿನ ಪರಿಣಾಮವಾಗಿ ಬಂಗಾಳ ಸಂಪೂರ್ಣ ಬ್ರಿಟಿಷರ ವಶವಾಯಿತು. ಮೀರ್ ಜಾಫರ್ ಬ್ರಿಟಿಷರ ಕೈಗೊಂಬೆ ನವಾಬನೆಂದು ನೇಮಕಗೊಂಡನು.
ಬ್ರಿಟಿಷ್ ಸಾಮ್ರಾಜ್ಯವನ್ನು ಭಾರತದಲ್ಲಿ ಸ್ಥಾಪಿಸುವುದರಲ್ಲಿ ನಿರ್ಣಾಯಕ ಘಟ್ಟಗಳಲ್ಲಿ ಪ್ಲಾಸಿಯ ಯುದ್ಧವೂ ಒಂದು ಎಂದು ಇಂದು ಗುರುತಿಸಲಾಗಿದೆ. ಬಂಗಾಳದ ಬೊಕ್ಕಸದ ಅಪರಿಮಿತ ಸಂಪತ್ತು , ತುಂಬಿ ತುಳುಕುತ್ತಿದ್ದ ದವಸ ಧಾನ್ಯಗಳ ಆಗರ , ಮತ್ತು ವಿಪುಲ ಸುಂಕದ ಉತ್ಪತ್ತಿ ಇವುಗಳಿಂದ ಬ್ರಿಟಿಷರು ತಮ್ಮ ಸೈನ್ಯಬಲವನ್ನು ಗಣನೀಯವಾಗಿ ಹೆಚ್ಚಿಸಿಕೊಂಡು ಭಾರತದಲ್ಲಿ ಬೇರು ಬಿಡಲು ಬಹಳ ಸಹಾಯವಾಯಿತು. ಆದರೂ , ಹತ್ತು ವರ್ಷಗಳ ನಂತರದ ಬಕ್ಸಾರ್ ಕದನ ಬ್ರಿಟಿಷ್ ಸಾಮ್ರಾಜ್ಯ ಭಾರತದಲ್ಲಿ ಬಲವಾಗಿ ನೆಲೆಯೂರಲು ಅತಿ ನಿರ್ಣಾಯಕವಾಗಿತ್ತು.
ಪ್ಲಾಸಿ ಶಬ್ದ ಮೂಲ ಬಂಗಾಳಿ ಪಲಾಶಿ ( ಒಂದು ಹೂವಿನ ಹೆಸರು)ಯಿಂದ ಬಂದಿದೆ.
0 Comments